ಅಬ್ಬೆ

Ratings1

Average rating5

15

ಅದ್ಭುತವಾದ ಕಾದಂಬರಿ. ಲೇಖಕರ ವೃತ್ತಿಯ ಹಳೆಯ ನೆನಪುಗಳು, ಮತ್ತು ಅವರ ಹವ್ಯಾಸಗಳನ್ನು ಸೇರಿಸಿ ಬರೆದ ಕಥಾನಕ ನನ್ನನ್ನು ಬೇಗ ಓದಿಸಿಕೊಂಡು ಹೋಯಿತು ಮತ್ತು ಎಲ್ಲೂ ಸಹ ನಿಧಾನವೆಂದು ಅನ್ನಿಸಲಿಲ್ಲ. ಕಲ್ಕೆರೆ ಎಂಬ ಊರಲ್ಲಿ ಅಡಗಿದ್ದ ಅನೂಹ್ಯ ಸಂಗತಿಗಳನ್ನು ಲೇಖಕರು ಅನಾವರಣಗೊಳಿಸಲು ನಡೆಸುತ್ತಿದ್ದ ಪ್ರಯತ್ನದಲ್ಲಿ ನಾವೂ ಸಹ ಭಾಗಿಯಾಗಬೇಕೆಂಬ ಬಯಕೆ ಬಂದದ್ದು ಸುಳ್ಳಲ್ಲ.
ಕಲ್ಕೆರೆ ಎಂಬ ಊರು, ಡಾ. ಕಲ್ಲೂ ರಾಯರು, ಕೆಂಚಪ್ಪ, ಅಲ್ಲಿ ನಾಯಕನು ಪ್ರಕೃತಿಯೊಂದಿಗೆ ಬೆರೆಯುವ ರೀತಿ ಇವೆಲ್ಲವೂ ತೇಜಸ್ವಿಯವರ ಕಥೆಗಳ ಮುಂದುವರೆದ ಪಾತ್ರಗಳು ಎಂಬಂತೆ ಭಾಸವಾಯಿತು. ಇದರ ಮಧ್ಯೆ ಅಬ್ಬೆ ಎಂಬ ನಿಗೂಢ ಜೇಡದ ಕಾಣದ ಪಾತ್ರ. ಲೇಖಕರಿಗಿರುವ ಕಥೆ ಹೆಣೆಯುವ ಸಾಮರ್ಥ್ಯವನ್ನು ತೋರಿಸಿತು.
ಕಾದಂಬರಿ ಮುಗಿಸಿದಾಗ ಅನ್ನಿಸಿದ್ದು ಅಬ್ಬೆ ಜೇಡದ ಬಗ್ಗೆ ಉಪಸಂಹಾರವಾಗದೇ ಇದ್ದದ್ದು. ಅದಕ್ಕಾಗಿ ಕಾದಂಬರಿಯ ನಾಯಕ ಮತ್ತೆ ಕಲ್ಕೆರೆಗೆ ಬರುವನೇ?
ಬರಲಿ ಎಂಬುದು ನನ್ನ ಆಶಯ.

September 16, 2023Report this review